Home

Brief introduction of Tarikere

 

Tarikere is a taluk in Chikmaglur district in the state of Karnataka of India . The headquarters of Tarikere taluk is a town of the same name. The town has derived its name from number of water tanks by which the town is surrounded (Kere means large water tank) namely, Chikkere,(Small Tank) Doddakere, (Big Tank) Dalavikere, Ramanayakankere,kenddarahalla. etc.

Road - National Highway NH-206  (Banglore to Honnavar ) passes through the Tarikere town. From the district headquarters of Chikmaglur, Tarikere can be reached by a road via Lingadahalli. The famous hill station of  Kemmangundi falls on this road.

Rail - Tarikere lies on the Banglore to Shimoga  railway line and there are trains from Mysore and Banglore which stop at Tarikere on the way to Shimoga.

Business and Economy

Vigyan Industries, a subsidiary of BEML is present near Tarikere town. It is a major producer of steel castings.

Agriculture is the primary industry here.Betle nut, paddy, raagi,arecanut, coffee , Coconut , Banana ,Pan leaves and Corn are the major cash crops grown in this district.

 

Places to see

  • Kemmangundi is a popular hill station in Tarikere Taluk.
  • Amrithapura , in Tarikere taluk is a temple town famous for the Amritheshwara temple which was constructed by the Hoysalas
  • Kallathi Giri is a popular mini falls on the top of lord Veera bhadra temple. Every one must see this beautiful place.

ತರೀಕೆರೆ ಪಟ್ಟಣದ ಪಕ್ಷಿನೋಟ

ಮಲೆನಾಡು ಬಯಲುಸೀಮೆಯ ಪ್ರಕೃತಿ ದತ್ತ ಸೌಂದರ್ಯದ ನಡುವೆ ಐತಿಹಾಸಿಕ ಧಾರ್ಮಿಕ ಸಾಮಾಜಿಕ ಭವ್ಯ ಪರಂಪರೆಯನ್ನು ಹೊಂದಿರುವ ತರೀಕೆರೆ ಪ್ರಾಕೃತಿಕ ಸಿರಿವಂತಿಕೆಯನ್ನು ಮತ್ತೆ ಮತ್ತೆ ನೋಡಬೇಕೆನಿಸುವ ಪ್ರವಾಸಿ ತಾಣಗಳನ್ನು ಪಡೆದಿರುವ ಸ್ಥಳ.ರಾಜಮಹಾರಾಜರುಗಳು ಕಾಲದಿಂದಲೂ ಭವ್ಯ ಚಾರಿತ್ರಿಕ ಹಿನ್ನಲೆಯನ್ನು ಪಡೆದಿರುವ ತಾಲ್ಲೂಕಿನಲ್ಲಿ ಭದ್ರಾನದಿ ಹರಿದುಹೋದರೆ ದಕ್ಷಿಣ ದಿಕ್ಕಿನಲ್ಲಿ ಪರ್ವತ ಗಿರಿ ಶ್ರೇಣಿಗಳು, ಪೂರ್ವದಲ್ಲಿ ದಕ್ಷಿಣ ಕಾಶಿ ಸೋಂಪುರ , ಪರ್ವತ ತಪ್ಪಲಿನಲ್ಲಿ ಕಲ್ಲತ್ತಿಗಿರಿ , ಅಮೃತೇಶ್ವರ  ಪಟ್ಟಣದಲ್ಲಿ ಬೂದಿ ಬಸವೇಶ್ವರ ಸ್ವಾಮಿ,ಶ್ರೀ ಸುಬ್ರಮಣ್ಯ ಮತ್ತು ಶ್ರೀ ರೇವಣಸಿದ್ದೇಶ್ವರ ದೇವಾಲಯಗಳನ್ನು ಒಳಗೋಂಡಿದೆ.

ಧಟ್ಟ ಅರಣ್ಯ ಪ್ರದೇಶಗಳಿಂದ ಆವೃತವಾಗಿ ಬೆಲೆಬಾಳುವ ಸಾಗುವಾನಿ ,ಬೀಟೆ ,ಮಾವು ,ಹಲಸು ,ತಾರೆ ಮರಗಳಿಂದ ಕೂಡಿದ್ದು ಔಷಧಯುಕ್ತ ಸಸ್ಯ ಸಮೃದ್ದಿ ಪಡೆದಿರುವ ಭೂಪ್ರದೇಶ ಭೌಗೋಳಿಕವಾಗಿ ಕೂಡ ವರ್ಷದ ಸದಾ ಕಾಲ ಹಸಿರು ಸೂಸಿ ಅತ್ಯಂತ ಅರೋಗ್ಯಕರವಾದ ವಾಯು ಮಾಲಿನ್ಯದಿಂದ ಹೊರತಾದ ವಾತಾವರಣ ಹೊಂದಿದೆ. ತೆಂಗು , ಬಾಳೆ , ಅಡಿಕೆ ,ಕಬ್ಬು ಮತ್ತು ತರಿ ಭೂಮಿಯಿಂದ ಒಳಗೋಂಡಿರುವ ತರೀಕೆರೆ ಒಟ್ಟಾರೆ ಭೂಪ್ರದೇಶ ಕಣ್ಣು ಹಾಯಿಸಿದ ಕಡೆ ಕೆರೆ ತೋಟ ಹಳ್ಳ ಕೋಳ್ಳ ಗಳಿಂದ ಕೂಡಿದೆ. ತರೀಕೆರೆ ತೋಟಗಳಲ್ಲಿ ಅಡಿಕೆ ಮರಗಳಿಂದ ರೈತಾಪಿ ಜನರು ಶ್ರಮದಿಂದ ವರ್ಷಪೂರ್ತಿ ಬಿಳೆಯುವ ಚಿಗುರು ವಿಳ್ಳೆದೆಲೆ ರುಚಿಗೆ ಪ್ರಖ್ಯಾತಿ ಪಡೆದಿದ್ದು ವಿದ್ಯುಕ್ತವಾಗಿ ಅಷ್ಟೇ ಶಾಸ್ತ್ರೋಕ್ತವಾಗಿ ಅಷ್ಠ ದೇವತೆಗಳನ್ನು ಎಂಟು ಎಲೆಗಳಲ್ಲಿ ವಿಸ್ತುತವಾಗಿ ತರೀಕೆರೆ  ವಿಳೆದೆಲೆ ಹೋಂದಿದ್ದು , ಮದುವೆ , ಮುಂಜಿ, ನಾಮಕರಣ, ಆಸ್ತಿ ಒಡಂಬಡಿಕೆ ಇತ್ಯಾದಿ ಶುಭ ಕಾರ್ಯಗಳಲ್ಲಿ ಒಡಂಬಡಿಕೆಯ ತಾಂಬೂಲ ವಿಳ್ಯನೀಡಿದರೆ ಅದೇ ಅಂತಿಮವಾದ ತೀರ್ಪೂ ಎಂಬುವುದೇ ತರೀಕೆರೆ ವಿಳ್ಯೆದೆಲೆಯ ಧವಳ ಕೀರ್ತಿ .

ವೀರ ಪಾಳೇಗಾರರು ಗಂಡು ಮೆಟ್ಟಿದ ಗಂಡು ಭೂಮಿ ಎಸಿಸಿದ ಈ ಭೂಪ್ರದೇಶದಲ್ಲಿ ಐತಿಹಾಸಿಕ ಚಾರಿತ್ರಿಕ ಧಾರ್ಮಿಕ ಹಿನ್ನಲೆಯುಳ್ಳ ಪ್ರವಾಸಿ ತಾಣಗಳು ,ರಾಜಮಹರಾಜರ ಕಾಲದ ಪ್ರಾಚೀನ ದೇವಾಲಯಗಳು ಜಲಸಂಪತ್ತು, ಅರಣ್ಯಸಂಪತ್ತು, ಖನಿಜಸಂಪತ್ತ , ಬಹು ಅಪರೂಪವೆನಿಸುವ ವನ್ಯ ಮೃಗಗಳು ,ಪಕ್ಷಿಗಳು ,ಗಿರಿ ಗುಡ್ಡಗಳಿಗೆ ಕಡಿಮೆ ಏನಿಲ್ಲ.ತರೀಕೆರೆ ಎಂದಾಕ್ಷಣ ಪ್ರವಾಸಿಗರ ಮನದಲ್ಲಿ ತಟ್ಟನೆ ಹೊಳೆಯುವ ಸ್ಥಳವೆಂದರೆ ಅದು ಅಮೃತಾಪುರ,ಶಿಲೆಯಲಿ ಕಲೆಯ ಹೊರ್ಣಿಸಿ ,ರಾಮಾಯಣ ಮಹಾಭಾರತ ,ಉಪನಿಷತ್ತು ಕಥೆಗಳನ್ನು ಸುಂದರ ಕಲಾಕೃತಿಗಳ ಮೂಲಕ ಜೀವಂತವಾಗಿಟ್ಟಿದಾರೆ.ಕಲ್ಲತ್ತಿಗಿರಿ ಮತ್ತು ಕೆಮ್ಮಣ್ಣುಗುಂಡಿ ಎರಡು ಭೂಪ್ರದೇಶಗಳು ಪ್ರವಾಸಿಗರ ದೃಷ್ಠಿಯಲ್ಲಿ ಲವ ಕುಶರಂತೆ ಒಂದಕೋಂದು ಪ್ರಖ್ಯಾತಿಯನ್ನು ಹೊಂದಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. 

" This Page is maintained by: Shri. B.M.Sheshappa, Revenue Officer TMC Tarikere."  

Last Updated on 10.01.2012

No. Of Visitors :
Last Updated   : 10/05/2012  Release History
Release 2.0.0, Powered By Karnataka Municipal Data Society & maintained by Tarikere TMC
This website can best viewed with the resolution 1024 * 768 using Internet Explorer 7.0 or above.
Valid CSS!